ಅಭಿಪ್ರಾಯ / ಸಲಹೆಗಳು

ನಮ್ಮ ಬಗ್ಗೆ

ಕರ್ನಾಟಕ ಕೋ-ಆಪರೇಟಿವ್ ಸೊಸೈಟೀಸ್ ಆ್ಯಕ್ಟ್ 1959 ರಡಿಯಲ್ಲಿ ನೊಂದಾಯಿಸಲಾಗಿದೆ ಮತ್ತು ನಿಯಮಗಳು 1960 ವೈಡ್/ಒಟಿಎಸ್/144/ಹೆಚ್.ಒ.ಟಿ/20768/9499

ಒಕ್ಕೂಟವು ಕರ್ನಾಟಕ ಸರ್ಕಾರದ ಸ್ವಾಮ್ಯಕ್ಕೊಳಪಟ್ಟಿದೆ.
ಒಕ್ಕೂಟದ ಸಂಯೋಜನೆ, ಉದ್ದೇಶಗಳು, ಕಾರ್ಯಗಳು, ನಿಯಮಗಳು ಮತ್ತು ಷರತ್ತುಗಳು ಹೀಗಿವೆ.

1. ಸಂಯೋಜನೆ:

ಒಕ್ಕೂಟವು ಫೆಡರಲ್ ಅಪೆಕ್ಸ್ ಸಂಸ್ಥೆಯಾಗಿದ್ದು, ಸಹಕಾರಿ ಕೋಳಿ ಸಾಕಾಣಿಕೆಗೆ ಎರಡು ಹಂತದ ವಿಧಾನವನ್ನು ಹೊಂದಿದೆ, ಅವುಗಳೆಂದರೆ ರಾಜ್ಯ ಮಟ್ಟದಲ್ಲಿ ಫೆಡರೇಶನ್ ಮತ್ತು ಪ್ರಾಥಮಿಕ ಕುಕ್ಕುಟ ಸಹಕಾರ ಸಂಘಗಳ ಮೂಲ ಮಟ್ಟದಲ್ಲಿ

ಒಕ್ಕೂಟದ ಆಡಳಿತವನ್ನು ಉಪವಿಧಿಯಂತೆ ವ್ಯವಸ್ಥಾಪಕ ನಿರ್ದೇಶಕರು (ಜಂಟಿ ನಿರ್ದೇಶಕರು) ಮತ್ತು ಇತರೆ 56 ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಪಶುಸಂಗೋಪನೆ ಮತ್ತು ಪಶುವೈದ್ಯ ಸೇವಾ ಇಲಾಖೆ ಮತ್ತು 1 ಎಆರ್‍ಸಿಎಸ್, ಸಹಕಾರ ಇಲಾಖೆಯಿಂದ ನಿಯೋಜಿಸಿ ನಿರ್ವಹಿಸಲಾಗಿದೆ ಅಧಿಕಾರಿ/ಸಿಬ್ಬಂದಿಗಳ ಸಂಬಳವನ್ನು ಕರ್ನಾಟಕ ಸರ್ಕಾರದಿಂದ ಪಾವತಿಲಾಗುತ್ತಿದೆ.

189 ಪ್ರಾಥಮಿಕ ಸಹಕಾರಿ ಕೋಳಿ ಸಂಘಗಳು ಒಕ್ಕೂಟಕ್ಕೆ ಸಂಯೋಜಿತವಾಗಿದೆ.

2. ನ್ಯಾಯವ್ಯಾಪ್ತಿ:

ಸದಸ್ಯತ್ವಕ್ಕೆ ಸಂಬಂಧಿಸಿದಂತೆ, ಒಕ್ಕೂಟವು ಇಡೀ ಕರ್ನಾಟಕ ರಾಜ್ಯದ ವ್ಯಾಪ್ತಿಯನ್ನು ಹೊಂದಿದೆ, ಒಕ್ಕೂಟದ ಸದಸ್ಯತ್ವವು ಮುಕ್ತವಾಗಿದೆ.
(1) ಕರ್ನಾಟಕ ಸರ್ಕಾರ,
(2) ಭಾರತ ಸರ್ಕಾರ,
(3) ಕರ್ನಾಟಕ ರಾಜ್ಯದ ಪ್ರಾಥಮಿಕ ಸಹಕಾರಿ ಕೋಳಿ ಸಂಘಗಳು.

3. ನಿರ್ವಹಣೆ:

ಒಕ್ಕೂಟವು 21 ನಿರ್ದೇಶಕರನ್ನು ಒಳಗೊಂಡ ಆಡಳಿತ ಮಂಡಳಿಯನ್ನು ಹೊಂದಿದೆ, ಅದರಲ್ಲಿ 13 ಮಂದಿ ಆಯ್ಕೆಯಾಗಿದ್ದಾರೆ, 01 ಸರ್ಕಾರದ ನಾಮ ನಿರ್ದೇಶಿತ ನಿರ್ದೇಶಕರು, 04 ಪದನಿಮಿತ್ತ ಅಧಿಕಾರಿಗಳು, 01 ವ್ಯವಸ್ಥಾಪಕ ನಿರ್ದೇಶಕರು ಮತ್ತು 02 ವೃತ್ತಿಪರ ನಿರ್ದೇಶಕರು.

ಪ್ರಸ್ತುತ 19 ನಿರ್ದೇಶಕರು, ಕೆಳಗೆ ವಿವರಿಸಿದಂತೆ ಆಡಳಿತ ಮಂಡಳಿಯಲ್ಲಿದ್ದಾರೆ.
(1) ಬೆಂಗಳೂರು ವಿಭಾಗದಿಂದ ನಾಲ್ವರು ಪ್ರತಿನಿಧಿಗಳು.
(2) ಮೈಸೂರು ವಿಭಾಗದಿಂದ ಮೂವರು ಪ್ರತಿನಿಧಿಗಳು.
(3) ಬೆಳಗಾವಿ ವಿಭಾಗದಿಂದ ಮೂವರು ಪ್ರತಿನಿಧಿಗಳು.
(4) ಕಲಬುರಗಿ ವಿಭಾಗದಿಂದ ಮೂವರು ಪ್ರತಿನಿಧಿಗಳು

ಮೇಲ್ಕಂಡ ನಿರ್ದೇಶಕರುಗಳು ಆಯಾ ಕಂದಾಯ ವಿಭಾಗಗಳಲ್ಲಿ ನೊಂದಾಯಿಸಲಾಗಿರುವ ಆಯಾ ಪ್ರಾಥಮಿಕ ಕೋಳಿ ಸಹಕಾರಿ ಸಂಘಗಳ ನಿರ್ದೇಶಕರ ಮಂಡಳಿಯಿಂದ 13 ನಿರ್ದೇಶಕರು ಆಯ್ಕೆಯಾಗುತ್ತಿದ್ದಾರೆ.
(5) ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರ (ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯಿಂದ ನಿಯೋಜಿಸಲಾಗಿದೆ.
(6) ಕರ್ನಾಟಕ ಸರ್ಕಾರದಿಂದ ನಾಮ ನಿರ್ದೇಶಿತ ನಿರ್ದೇಶಕರು

4. ಪದನಿಮಿತ್ತ ಅಧಿಕಾರಿ ನಿರ್ದೇಶಕರು.

(1) ನಿಬಂಧಕರು, ಸಹಕಾರ ಸಂಘಗಳ / ಅವರ ನಿರ್ದೇಶಿತ ಪ್ರತಿನಿಧಿ ಅಧಿಕಾರಿ.
(2) ಸರ್ಕಾರದ ಕಾರ್ಯದರ್ಶಿಗಳು, ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ.
(3) ನಿರ್ದೇಶಕರು, ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಸೇವೆಗಳು.
(4) ಉಪ ಕಾರ್ಯದರ್ಶಿ (ಖರ್ಚು) ಹಣಕಾಸು ಇಲಾಖೆ, ರಾಜ್ಯ ಸರ್ಕಾರದ ಒಬ್ಬ ನಿರ್ದೇಶಿತ
(5) 02 ಕೆಳಗೆ ವಿವರಿಸಿದಂತೆ ಐಚ್ಚಿಕವಾಗಿರುವ ಕ್ರಿಯಾತ್ಮಕ ನಿರ್ದೇಶಕರು.

ವೃತ್ತಿಪರ ನಿರ್ದೇಶಕರು.
ಮಂಡಳಿಯು ಇಬ್ಬರು ನಿರ್ದೇಶಕರನ್ನು ಮಂಡಳಿಗೆ ನೇಮಿಸಿಕೊಳ್ಳಬಹುದು, ಬ್ಯಾಂಕಿಂಗ್, ಮ್ಯಾನೇಜ್‍ಮೆಂಟ್, ಫೈನಾನ್ಸ್ ಸಲ್ಲಿಸಿದ ಒಬ್ಬ ನಿರ್ದೇಶಕರು ಮತ್ತು ಕೋಳಿ ಉತ್ಪಾದನೆ, ನಿರ್ವಹಣೆ, ಮಾರ್ಕೆಟಿಂಗ್ ಮತ್ತು ಸಂಬಂಧಿತ ವೃತ್ತಿಯಲ್ಲಿ ಸೇವೆ ಸಲ್ಲಿಸಿದ ಒಬ್ಬ ನಿರ್ದೇಶಕರು.

5.ಮಹಾಮಂಡಳದ ವರ್ಕಿಂಗ್ ಕ್ಯಾಪಿಟಲ್ / ಫಂಡ್‍ಗಳನ್ನು ಷೇರುಗಳು / ಠೇವಣಿ ಡಿಬೆಂಚರ್ಸ್ ಸಾಲಗಳು / ಅನುದಾನಗಳು / ಸಹಾಯಗಳು / ಸಹಾಯಧನ / ದೇಣಿಗೆ / ಇತ್ಯಾದಿಗಳ ಮೂಲಕ ಸಂಗ್ರಹಿಸಲಾಗುವುದು, ಪ್ರಸ್ತುತ ಪಾವತಿಸಿದ ಷೇರು ಬಂಡವಾಳ ರೂ. 4,50,000/-

ಇತ್ತೀಚಿನ ನವೀಕರಣ​ : 21-06-2021 01:35 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಸಹಕಾರ ಕುಕ್ಕುಟ ಮಹಾ ಮಂಡಳ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080